Yahoo ಮೇಲ್. ನಿಮ್ಮ ಸಂತೋಷದಾಯಕ ಸ್ಥಳ.
Yahoo ಮೇಲ್ ಮೂಲಕ ದಿನದಾದ್ಯಂತ ಆಯೋಜಿತವಾಗಿರಿ.

ನಿಮ್ಮ ಎಲ್ಲಾ ಖಾತೆಗಳನ್ನು ಸಂಪರ್ಕಪಡಿಸಿ, ಫೋಟೋಗಳು ಮತ್ತು ಅನಿಮೇಟ್ ಮಾಡಿದ GIF ಗಳನ್ನು ಸುಲಭವಾಗಿ ಹಂಚಿಕೊಳ್ಳಿ ಮತ್ತು 1000 GB ಗಳಷ್ಟು ಉಚಿತ ಸಂಗ್ರಹ ಪಡೆಯಿರಿ.

ನಿಮ್ಮ ಎಲ್ಲಾ ಖಾತೆಗಳನ್ನು ಸಂಪರ್ಕಪಡಿಸಿ, ಫೋಟೋಗಳು ಮತ್ತು ಅನಿಮೇಟ್ ಮಾಡಿದ GIF ಗಳನ್ನು ಸುಲಭವಾಗಿ ಹಂಚಿಕೊಳ್ಳಿ ಮತ್ತು 1000 GB ಗಳಷ್ಟು ಉಚಿತ ಸಂಗ್ರಹ ಪಡೆಯಿರಿ.
ಪರಿಶೀಲಿಸುತ್ತಿದೆ...
Yahoo ಮೇಲ್ ಆಪ್
ಸುಂದರ, ಬಳಸಲು ಸುಲಭ ಮತ್ತು ಮಿಂಚಿನಷ್ಟು ವೇಗ. ಅಧಿಕ ರೆಸೊಲ್ಯೂಶನ್ ಫೋಟೋಗಳನ್ನು ಕಳುಹಿಸುವುದನ್ನು, ಇನ್‌ಬಾಕ್ಸ್‌ಗಳ ನಡುವೆ ಬದಲಾಯಿಸುವುದನ್ನು ಮತ್ತು ನಿಮ್ಮ ಪಾಸ್‌ವರ್ಡ್ ಬಿಟ್ಟು ಸುರಕ್ಷಿತವಾಗಿ ಸೈನ್ ಇನ್ ಮಾಡುವುದನ್ನು Yahoo ಮೇಲ್ ಆಪ್ ಸುಲಭಗೊಳಿಸುತ್ತದೆ.

ಇಮೇಲ್‌ನಲ್ಲಿ ಕಡಿಮೆ ಸಮಯ. ನಿಮ್ಮ ಕುರಿತಾಗಿ ಹೆಚ್ಚು ಸಮಯ.
ಬಹು ಇನ್‌ಬಾಕ್ಸ್‌ಗಳನ್ನು ಪರಿಶೀಲಿಸುವುದನ್ನು ನಿಲ್ಲಿಸಿ. ನಿಮ್ಮೆಲ್ಲಾ ಇನ್‌ಬಾಕ್ಸ್‌ಗಳನ್ನು Yahoo ಮೇಲ್ ಇದರಲ್ಲಿ Gmail, Outlook, Hotmail ಮತ್ತು AOL ಒಳಗೊಂಡಂತೆ ಸಂಪರ್ಕಿಸಿ.

ಇನ್ನಷ್ಟು ತಿಳಿಯಿರಿ
ಇನ್ನಷ್ಟು ತಿಳಿಯಿರಿ
ಹೊಸ ಫೀಚರ್‌ಗಳನ್ನು ಅನ್ವೇಷಿಸಿ
ನಿಮ್ಮ ಮೇಲ್ ಅನುಭವವನ್ನು ಉತ್ತಮವಾಗಿ ಮಾಡಲು ನಿಮಗೆ ಅಗತ್ಯವಾದ ಎಲ್ಲಾ ಪರಿಕರಗಳು.
ಹೊಸತೇನು
ಇನ್‌ಬಾಕ್ಸ್
ರಚಿಸು
ಕ್ಯಾಲೆಂಡರ್
ಸಂಪರ್ಕಗಳು
ಶೇಖರಣೆ
ಸುರಕ್ಷತೆ
ಸಾಕಷ್ಟು ಸಂತೋಷ ಪಡೆಯಿರಿ
Yahoo ಮೇಲ್ ನಲ್ಲಿ ಹೊಚ್ಚ ಹೊಸತಾದ ಥೀಮ್‌ಗಳನ್ನು ಬಳಸಿಕೊಂಡು ನಿಮ್ಮ ದಿನವನ್ನು ಉಜ್ವಲವಾಗಿಸಿ..
ಸ್ಕ್ರೀನ್ ತೀರಾ ಪ್ರಕಾಶಮಾನವಾಗಿದೆಯೇ? ಗಾಢವಾದ, ಆಧುನಿಕ ನೆರಳುಗಳಿಂದ ಪ್ರಕಾಶಮಾನವಾದವು, ಬೋಲ್ಡ್ ಥೀಮ್‌ಗಳನ್ನು ಒಳಗೊಂಡು ಬಣ್ಣಗಳ ಸರಣಿಯ ಜೊತೆಗೆ ಗ್ರಾಹಕೀಯಗೊಳಿಸಿ.
ಇನ್‌ಬಾಕ್ಸ್
ನಿಮ್ಮ ಇಮೇಲ್‌ಗೆ ಸ್ವಾಗತ. ಶಕ್ತಿಶಾಲಿ ಥೀಮ್‌ಗಳೊಂದಿಗೆ ನಿಮ್ಮ ಇನ್‌ಬಾಕ್ಸ್ ಅನ್ನು ವೈಯಕ್ತಿಕಗೊಳಿಸಿ ಮತ್ತು ನಿಮಗೆ ಅರ್ಥಪೂರ್ಣವಾಗುವಂತೆ ಕಂಡುಬರುವ ರೀತಿಯಲ್ಲಿ ನಿಮ್ಮ ಮೇಲ್ ಆಯೋಜಿಸಿ. ನಿಮ್ಮ ಕ್ಯಾಲೆಂಡರ್, ನೋಟ್‌ಪ್ಯಾಡ್, ಸಂಪರ್ಕಗಳು, ತತ್‌ಕ್ಷಣದ ಸಂದೇಶಗಳು ಮತ್ತು ಶೋಧದಂತಹ ನೀವು ಪ್ರತಿದಿನ ಬಳಸುವ ಪರಿಕರಗಳಿಗೆ ತ್ವರಿತವಾಗಿ ಪ್ರವೇಶಿಸಿ. ನಮ್ಮ ಸಂದೇಶ ಟೂಲ್‌ಬಾರ್ ಮತ್ತು ತ್ವರಿತ ಕ್ರಿಯೆಗಳು ಕೆಲವು ಕ್ಲಿಕ್‌ಗಳಲ್ಲಿ ಇಮೇಲ್‌ಗಳನ್ನು ವಿಂಗಡಿಸಲು, ಗುರುತಿಸಲು ಮತ್ತು ಅಳಿಸಲು ಸರಳವಾಗಿಸುತ್ತವೆ.
ನ್ಯಾವಿಗೇಶನ್
ಫೋಲ್ಡರ್‌ಗಳು
ಮಲ್ಟಿಟಾಸ್ಕಿಂಗ್
ವೈಯಕ್ತೀಕರಣ
ನಿಮ್ಮ ಇನ್‌ಬಾಕ್ಸ್, ಸಂಪರ್ಕಗಳು, ಕ್ಯಾಲೆಂಡರ್, ನೋಟ್‌ಪ್ಯಾಡ್ ಮತ್ತು ಮೆಸೆಂಜರ್ ಅನ್ನು ಇದೀಗ ಎಡ ಮೂಲೆಯ ಮೇಲ್ಭಾಗದಲ್ಲಿ ಒಟ್ಟಿಗೆ ಗುಂಪು ಮಾಡಲಾಗಿದ್ದು ಕಾರ್ಯಗಳ ನಡುವೆ ಬದಲಾಯಿಸಲು ಕೇವಲ ಒಂದೇ ಕ್ಲಿಕ್‌ನಷ್ಟು ದೂರವಿರುವಂತೆ ಮಾಡಿದೆ. ಇಮೇಲ್ ಓದುತ್ತಿರುವಾಗ ಹೊಸ ತತ್‌ಕ್ಷಣದ ಸಂದೇಶವನ್ನು ನೀವು ಪಡೆದರೆ, ನೀವು ಕೆಲಸವನ್ನು ಕಳೆದುಕೊಳ್ಳದಂತೆ ನಿಮಗೆ ಮಾಡುವ ಫ್ಲೋಟಿಂಗ್ ವಿಂಡೋ ತೆರೆಯಲು ಮೆಸೆಂಜರ್ ಐಕಾನ್ ಕ್ಲಿಕ್ ಮಾಡಿ.
ಫೋಲ್ಡರ್‌ಗಳೊಂದಿಗೆ ನಿಮ್ಮ ಇನ್‌ಬಾಕ್ಸ್ ಅನ್ನು ಚೆನ್ನಾಗಿ ಮತ್ತು ಸ್ವಚ್ಛವಾಗಿ ಇಟ್ಟುಕೊಳ್ಳಿ. ಪ್ರಮುಖ ಸಂದೇಶಗಳನ್ನು ಫೈಲ್ ಮಾಡಿಡಿ ಅಥವಾ ನಿಮಗೆ ತ್ವರಿತ ಪ್ರವೇಶ ಅಗತ್ಯವಿರುವ ಇಮೇಲ್‌ಗಳ ಮೇಲ್ವಿಚಾರಣೆ ಮಾಡಿ. ನಿಮ್ಮ ಫೋಲ್ಡರ್‌ಗಳನ್ನು ಯಾವಾಗಲೂ ಪ್ರವೇಶಿಸಬಹುದು, ಈ ಮೂಲಕ ಅದನ್ನು ನಿಮಗೆ ಅಗತ್ಯವಾದಾಗಲೆಲ್ಲಾ ನಿಮಗೆ ಬೇಕಾದುದನ್ನು ಕಂಡುಕೊಳ್ಳಲು ಸುಲಭಗೊಳಿಸುತ್ತದೆ.
ನಿಮ್ಮ ಇಮೇಲ್‌ಗಳು, ಡ್ರಾಫ್ಟ್‌ಗಳು, ಶೋಧಗಳು, ನಿಮ್ಮ ಕ್ಯಾಲೆಂಡರ್ ಮತ್ತು ಸಂಪರ್ಕಗಳ ನಡುವೆ ಒಂದೇ ವಿಂಡೋನಲ್ಲಿ ಬದಲಾಯಿಸಲು ಟ್ಯಾಬ್‌ಗಳು ಸುಲಭಗೊಳಿಸುತ್ತವೆ. ಟ್ಯಾಬ್‌ಗಳನ್ನು ಆನ್ ಮಾಡಲು, ವೀಕ್ಷಣೆ, ಮಲ್ಟಿಟಾಸ್ಕಿಂಗ್‌ಗೆ ಹೋಗಿ ಮತ್ತು ಟ್ಯಾಬ್‌ಗಳನ್ನು ಆಯ್ಕೆಮಾಡಿ.
ನಿಮ್ಮ ಇನ್‌ಬಾಕ್ಸ್ ಅನ್ನು ನಿಮ್ಮದಾಗಿಸಿಕೊಳ್ಳಿ. ವಿನ್ಯಾಸವನ್ನು, ನೀವು ಹೇಗೆ ವಿಂಗಡಿಸುತ್ತೀರೆಂಬುದನ್ನು ಮತ್ತು ವೀಕ್ಷಣೆ ಮೆನುವಿನಲ್ಲಿ ನಿಮ್ಮ ಸಂದೇಶಗಳನ್ನು ಹೇಗೆ ಪೂರ್ವವೀಕ್ಷಣೆ ಮಾಡಬೇಕೆಂಬುದನ್ನು ಗ್ರಾಹಕೀಯಗೊಳಿಸಿ. ಟ್ಯಾಬ್‌ಗಳು ಮತ್ತು ಇತ್ತೀಚಿನವುಗಳೊಂದಿಗೆ ನಿಮ್ಮ ಕೆಲಸದ ಬಗ್ಗೆ ಗಮನಹರಿಸಲು ಅತ್ಯುತ್ತಮ ವಿಧಾನ ನಿರ್ಧರಿಸಿ. ಮತ್ತು ಆಯ್ಕೆಮಾಡಲು ಹಲವು ಸುಂದರ ಥೀಮ್‌ಗಳೊಂದಿಗೆ, ನಿಮ್ಮ ಸಾಧನಗಳಾದ್ಯಂತ ಕಂಡುಬರುವ ನಿಮ್ಮ ಇನ್‌ಬಾಕ್ಸ್ ನೋಟವನ್ನು ನೀವು ವೈಯಕ್ತಿಕಗೊಳಿಸಬಹುದು.
ರಚಿಸು
ಇಮೇಲ್ ಅನ್ನು ಕಂಪೋಸ್ ಮಾಡುವುದು ವೈಯಕ್ತಿಕ ಮತ್ತು ಉತ್ಪಾದಕೀಯ ಎರಡೂ ಆಗಿರಬೇಕು. Yahoo ಮೇಲ್ ನೊಂದಿಗೆ, ನಮ್ಮ ಕಂಪೋಸ್ ನಿಮಗೆ ಆಕರ್ಷಕ ಲಿಂಕ್ ಪೂರ್ವವೀಕ್ಷಣೆಗಳು ಮತ್ತು ಫಾರ್ಮ್ಯಾಟಿಂಗ್ ಆಯ್ಕೆಗಳೊಂದಿಗೆ ನಿಮ್ಮ ಸಂದೇಶವನ್ನು ರಚಿಸಲು ಮತ್ತು ವರ್ಧಿಸಲು ಅವಕಾಶ ನೀಡುತ್ತದೆ. ಜೊತೆಗೆ Dropbox ಮತ್ತು Flickr ಏಕೀಕರಣದೊಂದಿಗೆ ನೀವು ಫೈಲ್‌ಗಳು, ದಾಖಲೆಗಳು ಮತ್ತು ಫೋಟೋಗಳನ್ನು ಹಿಂದೆಂದಿಗಿಂತಲೂ ತ್ವರಿತವಾಗಿ ಲಗತ್ತಿಸಬಹುದು.
ಲಗತ್ತುಗಳು
ಪರ್ಯಾಯ ಮುನ್ನೋಟ
ಆತ್ಮವಿಶ್ವಾಸದೊಂದಿಗೆ ಫೈಲ್‌ಗಳನ್ನು ಕಳುಹಿಸಿ. 1TB ರಷ್ಟು ಉಚಿತ ಇಮೇಲ್ ಸ್ಥಳದೊಂದಿಗೆ, ನಿಮ್ಮ ಇನ್‌ಬಾಕ್ಸ್‌ನಲ್ಲಿ ದೊಡ್ಡ ಫೈಲ್‌ಗಳನ್ನು ಕಳುಹಿಸುವ ಮತ್ತು ಸ್ವೀಕರಿಸುವ ಕುರಿತಾಗಿ ಮತ್ತು ಸ್ಥಳಾವಕಾಶ ಮುಗಿದುಹೋಗುವ ಕುರಿತಾಗಿ ನೀವು ಎಂದಿಗೂ ಚಿಂತಿಸಬೇಕಾಗಿಲ್ಲ. ಪೇಪರ್‌ಕ್ಲಿಪ್ ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಕಂಪ್ಯೂಟರ್‌ನಿಂದ ಅಥವಾ ಡ್ರಾಪ್-ಡೌನ್ ಮೆನುವಿನಲ್ಲಿ ಕ್ಲಿಕ್ ಮಾಡುವ ಮೂಲಕ ನಿಮ್ಮ Flickr ಅಥವಾ Dropbox ನಿಂದ ಸುಲಭವಾಗಿ ಫೋಟೋಗಳು ಅಥವಾ ಡಾಕ್ಯುಮೆಂಟ್‌ಗಳನ್ನು ಲಗತ್ತಿಸಿ. ಹಾಗೆಯೇ ನಿಮ್ಮ ಕಂಪ್ಯೂಟರ್‌ನಿಂದ ಫೈಲ್‌ಗಳನ್ನು ಕಂಪೋಸ್ ಪ್ರದೇಶಕ್ಕೆ ನೀವು ಎಳೆಯಬಹುದು ಮತ್ತು ಬಿಡಬಹುದು ಮತ್ತು ತಕ್ಷಣದಲ್ಲೇ ಅವುಗಳನ್ನು ವೀಕ್ಷಿಸಬಹುದು.
ಪ್ರತಿದಿನ, Yahoo ಮೇಲ್ ನಲ್ಲಿ ಲಕ್ಷಾಂತರ ಜನರು ಲಗತ್ತುಗಳನ್ನು ಕಳುಹಿಸುತ್ತಾರೆ ಮತ್ತು ಸ್ವೀಕರಿಸುತ್ತಾರೆ. ನಿಮ್ಮ Microsoft Office ಲಗತ್ತುಗಳನ್ನು (Word, PowerPoint ಮತ್ತು Excel) ಮತ್ತು Adobe PDF ಗಳನ್ನು ನಿಮ್ಮ ಸಂದೇಶ ವೀಕ್ಷಣೆಯಲ್ಲಿಯೇ ತ್ವರಿತವಾಗಿ ಪೂರ್ವವೀಕ್ಷಣೆ ಮಾಡಿ. ಫೈಲ್ ಹೆಸರು ಕ್ಲಿಕ್ ಮಾಡಿ ಮತ್ತು — ಮುಗಿದಂತೆಯೇ! — ನಿಮ್ಮ ಡಾಕ್ಯುಮೆಂಟ್‌ನ ಪೂರ್ಣ ಪೂರ್ವವೀಕ್ಷಣೆಯನ್ನು ನೀವು ನೋಡುತ್ತೀರಿ.
ಕ್ಯಾಲೆಂಡರ್
ನಿಮ್ಮ ಬಿಡುವಿಲ್ಲದ ಷೆಡ್ಯೂಲ್ ಅನ್ನು ನಿರ್ವಹಿಸಲು ಮತ್ತು ಆಯೋಜಿಸಲು ನಿಮಗೆ ಸಹಾಯ ಮಾಡುವ ಪರಿಕರಗಳನ್ನು Yahoo ಕ್ಯಾಲೆಂಡರ್ ಹೊಂದಿದೆ.
ಕ್ಯಾಲೆಂಡರ್ ನಮೂದು
ಬಹು ಕ್ಯಾಲೆಂಡರ್‌ಗಳು
ಜನ್ಮದಿನಗಳು, ವಾರ್ಷಿಕೋತ್ಸವಗಳು, ಕಾರ್ಯನಿಗದಿಗಳಿಗೆ ಜ್ಞಾಪನೆಗಳನ್ನು ಪಡೆಯಿರಿ ಮತ್ತು ಪ್ರಮುಖ ಇವೆಂಟ್ ಅನ್ನು ಎಂದಿಗೂ ಮರೆಯಬೇಡಿ. Yahoo ಕ್ಯಾಲೆಂಡರ್‌ನೊಂದಿಗೆ, ನೀವು ಈವೆಂಟ್ ಸಂಭವಿಸುತ್ತಿರುವಾಗ ಸಮಯ ಮತ್ತು ದಿನಾಂಕದ ಮೇಲೆ ಕ್ಲಿಕ್ ಮಾಡುವ ಮೂಲಕ ಕ್ಯಾಲೆಂಡರ್ ನಮೂದುಗಳನ್ನು ನೀವು ರಚಿಸಬಹುದು. ಇವೆಂಟ್ ಶೀರ್ಷಿಕೆ ಸೇರಿಸಿ ಮತ್ತು ಜನರಿಗೆ ಈವೆಂಟ್‌ಗೆ ಆಮಂತ್ರಿಸಲು ಅಥವಾ ಎಚ್ಚರಿಕೆ ಜ್ಞಾಪನೆಯನ್ನು ಸೇರಿಸುವುದಕ್ಕಾಗಿ ಆಯ್ಕೆಗಳನ್ನು ನೋಡಲು ಹೆಚ್ಚು ವಿವರಗಳನ್ನು ಸೇರಿಸು ಆಯ್ಕೆಮಾಡಿ.
ಕೆಲವು ಜನರು ತಮ್ಮ ವೈಯಕ್ತಿಕ ಕಾರ್ಯನಿಗದಿಗಳನ್ನು, ಅವರ ಕೆಲಸ ಮತ್ತು ಶಾಲೆ ಷೆಡ್ಯೂಲ್‌ಗಳನ್ನು ಮತ್ತು ತಮ್ಮ ಕುಟುಂಬದ ಇವೆಂಟ್‌ಗಳನ್ನು ನಿರ್ವಹಿಸಲು ತಮ್ಮ ಕ್ಯಾಲೆಂಡರ್ ಬಳಸುತ್ತಾರೆ. ಕ್ಯಾಲೆಂಡರ್ ನಮೂದುಗಳನ್ನು ರಚಿಸುವುದನ್ನು ಮತ್ತು ಲೇಬಲ್ ಮಾಡುವುದನ್ನು ನಾವು ನಿಮಗಾಗಿ ಸುಲಭಗೊಳಿಸಿದ್ದೇವೆ ಇದರಿಂದ ನೀವು ನಿಮ್ಮ ಜೀವನದ ಬಹು ಭಾಗಗಳನ್ನು ತ್ವರಿತವಾಗಿ ಮೇಲ್ವಿಚಾರಣೆ ಮಾಡಬಹುದು ಮತ್ತು ನಿರ್ವಹಿಸಬಹುದು. ಹೊಸ ಕ್ಯಾಲೆಂಡರ್ ರಚಿಸಲು, ಕ್ಯಾಲೆಂಡರ್‌ಗಳ ಮುಂದಿರುವ ಗೇರ್ ಐಕಾನ್ ಕ್ಲಿಕ್ ಮಾಡಿ. ಹೆಸರು ಇಡಿ ಮತ್ತು ನಿಮ್ಮ ಕ್ಯಾಲೆಂಡರ್‌ಗಾಗಿ ಬಣ್ಣದ ಥೀಮ್ ಅನ್ನು ಆರಿಸಿ, ನಂತರ ಉಳಿಸಿ.
ನಿಮ್ಮ ಸಂಪರ್ಕಗಳು
ನಿಮ್ಮ ವೈಯಕ್ತಿಕ ನೆಟ್‌ವರ್ಕ್‌ನೊಂದಿಗೆ ಸಂಪರ್ಕದಲ್ಲಿರಿ. ನಮ್ಮ ಎರಡು-ಹಂತಗಳ ಆಮದು ವೈಶಿಷ್ಟ್ಯವು ನಿಮಗೆ ನಿಮ್ಮ Facebook ಖಾತೆ ಅಥವಾ Gmail ಅಥವಾ Outlook ನಂತಹ ಇಮೇಲ್ ಒದಗಿಸುವವರಿಂದ ಸಂಪರ್ಕಗಳನ್ನು ಸೇರಿಸಲು ನಿಮಗೆ ಅನುಮತಿಸುತ್ತದೆ, ಈ ಮೂಲಕ ಇಮೇಲ್ ಖಾತೆಗಳನ್ನು ಬದಲಾಯಿಸುವುದನ್ನು ಸುಲಭಗೊಳಿಸುತ್ತದೆ.
ಹೆಚ್ಚಿಸಿದ ಸಂಪರ್ಕಗಳು
ಸಂಪರ್ಕಗಳನ್ನು ಆಮದು ಮಾಡಿ
ಪ್ರತಿ ಸಂಪರ್ಕದ ಪ್ರೊಫೈಲ್‌ನಲ್ಲಿ, ಸಂದೇಶಗಳು, ಫೋಟೋಗಳು ಮತ್ತು ಫೈಲ್‌ಗಳನ್ನು ಒಳಗೊಂಡು ಅವರೊಂದಿಗೆ ನೀವು ಮಾಡಿದ ಹೆಚ್ಚು ಇತ್ತೀಚಿನ ಸಂವಹನಗಳ ಸ್ನಾಪ್‌ಶಾಟ್ ಅನ್ನು ನೀವು ಕಂಡುಕೊಳ್ಳುತ್ತೀರಿ. ಆದ್ದರಿಂದ ಮುಂಬರುವ ರಜಾದಿನದ ಬಗ್ಗೆ ಸ್ನೇಹಿತರೊಂದಿಗೆ ಉದ್ದವಾದ ಇಮೇಲ್ ಥ್ರೆಡ್ ಹೊಂದಿದ್ದರೆ, ನಿಮ್ಮ ಸಂಪರ್ಕಗಳಿಗೆ ನ್ಯಾವಿಗೇಟ್ ಮಾಡಿ ಮತ್ತು ಪ್ರವಾಸದ ಬಗ್ಗೆ ಅವರು ನಿಮಗೆ ಕಳುಹಿಸಿದ ಇತ್ತೀಚಿನ ಇಮೇಲ್‌ಗಳು ಮತ್ತು ಲಗತ್ತುಗಳನ್ನು ತ್ವರಿತವಾಗಿ ನೋಡಲು ನಿಮ್ಮ ಸ್ನೇಹಿತರ ಹೆಸರು ಆಯ್ಕೆಮಾಡಿ.
ನಿಮ್ಮ ಎಲ್ಲಾ ಸಂಪರ್ಕಗಳನ್ನು ಒಂದೇ ಸ್ಥಳದಲ್ಲಿ ನಿರ್ವಹಿಸಿ ಮತ್ತು ಆಯೋಜಿಸಿ. ಸಂಪರ್ಕಗಳ ವಿಭಾಗದಲ್ಲಿ, ಸಂಪರ್ಕಗಳನ್ನು ಆಮದು ಮಾಡಿ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಸಂಪರ್ಕಗಳನ್ನು ನೀವು ಆಮದು ಮಾಡಿಕೊಳ್ಳಲು ಬಯಸುವ ಒದಗಿಸುವವರನ್ನು ಆಯ್ಕೆಮಾಡಿ: Facebook, Google, Outlook, ಮತ್ತೊಂದು Yahoo ಖಾತೆ ಅಥವಾ .csv ಅಥವಾ .vcf ಫೈಲ್ ಅಪ್‌ಲೋಡ್ ಮಾಡಿ.
ಶೇಖರಣೆ
Yahoo ಮೇಲ್ ನಿಮಗೆ ಯಾವುದೇ ಇಮೇಲ್ ಒದಗಿಸುವವರಿಗಿಂತ ಹೆಚ್ಚು ಉಚಿತ ಸಂಗ್ರಹಣೆಯನ್ನು ನೀಡುತ್ತದೆ. 1TB ರಷ್ಟು ಉಚಿತ ಸ್ಥಳದೊಂದಿಗೆ (ಇದು 1000 GB!), ಸ್ಥಳವನ್ನು ಉಳಿಸುವುದಕ್ಕಾಗಿ ಇಮೇಲ್‌ಗಳನ್ನು ಅಳಿಸುವ ಬಗ್ಗೆ ನೀವು ಎಂದಿಗೂ ಚಿಂತಿಸಬೇಕಾಗಿಲ್ಲ.
1 TB ಶೇಖರಣೆ
ನಿಮಗೆ ಕಳುಹಿಸಿದ ಎಲ್ಲಾ ಇಮೇಲ್‌ಗಳು ಮತ್ತು ಫೈಲ್‌ಗಳನ್ನು ಇರಿಸಿಕೊಳ್ಳಿ. ನೀವು ಎಷ್ಟು ಶೇಖರಣೆಯನ್ನು ಹೊಂದಿದ್ದೀರೆಂದು ಪರಿಶೀಲಿಸಲು, ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಖಾತೆಗಳ ಅಡಿಯಲ್ಲಿ ನೀವು ಬಳಸಿದ ಶೇಖರಣೆಯ ಶೇಕಡಾವನ್ನು ನೀವು ನೋಡುತ್ತೀರಿ.
ಸುರಕ್ಷತೆ
ನಿಮ್ಮನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸಲು ಸಹಾಯ ಮಾಡಲು ಪ್ರಮುಖ ಭದ್ರತೆ ತಂತ್ರಜ್ಞಾನವನ್ನು Yahoo ಮೇಲ್ ಬಳಸುತ್ತದೆ. ನಿಮ್ಮ ಕಂಪ್ಯೂಟರ್‌ನ ವೆಬ್ ಬ್ರೌಸರ್ ಮತ್ತು Yahoo ಸರ್ವರ್‌ಗಳ ನಡುವೆ SSL ಎನ್‌ಕ್ರಿಪ್ಶನ್ ಸಂಚರಿಸುವುದರಿಂದ ಇದು ನಿಮ್ಮ ಮೇಲ್ ಅನ್ನು ಸುರಕ್ಷಿತವಾಗಿರಿಸುತ್ತದೆ. ಇದರರ್ಥ ನೀವು ಎಲ್ಲಿಯೇ ಇರಲಿ, ನೀವು ಮನೆಯಲ್ಲಿರಲಿ ಅಥವಾ ಕಾಫಿ ಅಂಗಡಿಯಲ್ಲಿ ನಿಮ್ಮ ಮೇಲ್ ಬ್ರೌಸ್ ಮಾಡುತ್ತಿರಲಿ, ನಿಮ್ಮ ಮೇಲ್ ಮಾಹಿತಿಯನ್ನು ಸುರಕ್ಷಿತವಾಗಿರಿಸಲಾಗುತ್ತದೆ.
SSL
ನೀವು ಯಾವುದೇ ಸಮಯದಲ್ಲಿ Yahoo ಮೇಲ್ ಬಳಸಿರಿ - ಅದು ವೆಬ್‌ನಲ್ಲಿ, ಮೊಬೈಲ್ ವೆಬ್‌ನಲ್ಲಿ, ಮೊಬೈಲ್ ಆಪ್‌ಗಳಲ್ಲಿ ಅಥವಾ IMAP, POP ಅಥವಾ SMTP ಮೂಲಕವಾಗಲಿ - ಇದು ಡೀಫಾಲ್ಟ್ ಆಗಿ 100% ಎನ್‌ಕ್ರಿಪ್ಟ್ ಆಗಿರುತ್ತದೆ ಮತ್ತು 2,048 ಬಿಟ್ ಪ್ರಮಾಣಪತ್ರಗಳೊಂದಿಗೆ ರಕ್ಷಿತವಾಗಿರುತ್ತದೆ. ಈ ಎನ್‌ಕ್ರಿಪ್ಶನ್ ನಿಮ್ಮ ಇಮೇಲ್‌ಗಳು, ಲಗತ್ತುಗಳು, ಸಂಪರ್ಕಗಳು ಜೊತೆಗೆ ಮೇಲ್‌ನಲ್ಲಿರುವ ಕ್ಯಾಲೆಂಡರ್ ಮತ್ತು ಮೆಸೆಂಜರ್‌ಗೆ ಸಹ ವಿಸ್ತರಿಸುತ್ತದೆ.
ಸ್ಪ್ಯಾಮ್ ಫಿಲ್ಟರ್‌ಗಳು
Yahoo ಮೇಲ್ ದಿನಾಲೂ 15 ಬಿಲಿಯನ್‌ಗಿಂತಲೂ ಅಧಿಕ ಸ್ಪಾಮ್ ಸಂದೇಶಗಳನ್ನು ನಿರ್ಬಂಧಿಸುತ್ತದೆ. ನಾವು ಯಂತ್ರ ಕಲಿಕೆಯನ್ನು ಬಳಸುತ್ತೇವೆ ಮತ್ತು ನೀವು ನೋಡಲು ಬಯಸದ ಸ್ಪ್ಯಾಮ್ ಮತ್ತು ಇತರ ದುರುದ್ದೇಶಪೂರಿತ ಇಮೇಲ್‌ಗಳನ್ನು ನಿರ್ಬಂಧಿಸುವ ನಮ್ಮ ಫಿಲ್ಟರಿಂಗ್ ತಂತ್ರಜ್ಞಾನಗಳನ್ನು ನಿರಂತರವಾಗಿ ಪರಿಷ್ಕರಿಸುತ್ತೇವೆ ಮತ್ತು ಸುಧಾರಿಸುತ್ತೇವೆ. ನಿಮ್ಮ ಇನ್‌ಬಾಕ್ಸ್‌ನಲ್ಲಿ ನೀವು ಪ್ರತಿ ಬಾರಿಯೂ ಅನಪೇಕ್ಷಿತ ಇಮೇಲ್‌ಗಳನ್ನು ಎದುರಿಸಿದಾಗ ಸ್ಪ್ಯಾಮ್ ಬಟನ್ ಕ್ಲಿಕ್ ಮಾಡುವ ಮೂಲಕ ಫಿಲ್ಟರ್‌ಗಳಿಗೆ ತರಬೇತಿ ನೀಡಲು ನೀವು ಸಹಾಯ ಮಾಡಬಹುದು.
ಹೆಚ್ಚು ಬೇಕೇ? ನಮ್ಮ ಫೀಚರ್ ಡೈರೆಕ್ಟರಿಯಲ್ಲಿ Yahoo ಮೇಲ್ನ ಎಲ್ಲಾ ಶಕ್ತಿಶಾಲಿ ಪರಿಕರಗಳನ್ನು ಹೇಗೆ ಬಳಸುವುದೆಂದು ತಿಳಿಯಿರಿ